ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವಿಶೇಷ ಕಾರ್ಯ ನಿರತ ಪಡೆ ಮತ್ತು ಜಾಗೃತ ದಳ ಪೊಲೀಸ್ ವಿಭಾಗದಲ್ಲಿ ಸರ್ಕಾರದ ಆದೇಶ ಸಂಖ್ಯೆHUD 403 MNJ 90 ದಿನಾಂಕ 05-10-1990 ರ ಪ್ರಕಾರ ಸೃಜನೆ ಮಾಡಲಾಗಿರುತ್ತದೆ.
ವಿಶೇಷ ಕಾರ್ಯನಿರತ ಪಡೆ ಮತ್ತು ಜಾಗೃತ ದಳದ ಕಾರ್ಯಗಳ ವಿವರ
1) ಪ್ರಾಧಿಕಾರದ ಜಮೀನು/ ಆಸ್ತಿ ಸಂರಕ್ಷಣೆ ಕಾರ್ಯಗಳನ್ನು ಪ್ರಾಧಿಕಾರದ ಜಮೀನು ಮತ್ತು ಸ್ವತ್ತಿನಲ್ಲಿ ಅತಿಕ್ರಮ ಆಕ್ರಮಿಸುವಿಕೆ, ಅನಧಿಕೃತ ನಿರ್ಮಾಣ ಕಾರ್ಯಗಳನ್ನು, ಅನಧಿಕೃತ ನಿರ್ಮಾಣ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಪ್ರಾಧಿಕಾರದ ಸ್ವತ್ತಿನಲ್ಲಿನ ಅನಧಿಕೃತ ಒತ್ತುವರಿ ಮತ್ತು ಅನಧಿಕೃತ ಕಟ್ಟಡ ನಿರ್ಮಾಣಗಳನ್ನು ತೆರವುಗೊಳಿಸುವ ಸಂಬಂಧ ಅಭಿಯಂತರರ ವಿಭಾಗದಿಂದ ತೆರವು ಕಾರ್ಯಾಚರಣೆ ಆದೇಶ ಹೊರಡಿಸಿದ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಲು ಸೂಕ್ತ ರಕ್ಷಣೆ ಒದಗಿಸುವುದು.
2) ಅಕ್ರಮ ದಾಖಲಾತಿಗಳ ಮೂಲಕ ಪ್ರಾಧಿಕಾರದ ಆಸ್ತಿ/ಜಮೀನುಗಳಲ್ಲಿ ಅತಿಕ್ರಮಣ ಮಾಡಿ ಅನಧಿಕೃತ ಕಟ್ಟಡಗಳ ನಿರ್ಮಾಣ ಹಾಗೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಮೋಸ, ವಂಚನೆ ಮಾಡುವುದು ಪ್ರಾಧಿಕಾರದ ಅಧಿಕೃತ ದಾಖಲಾತಿಗಳನ್ನು ತಿದ್ದುವಂತಹ ಮತ್ತು ದುರುಪಯೋಗಪಡಿಸಿಕೊಳ್ಳುವಂತಹ ಕೃತ್ಯಗಳನ್ನು ಮಾಡುವವರುಗಳ ವಿರುದ್ದ ಬಿ.ಡಿ.ಎ ಮತ್ತು ಐ.ಪಿ.ಸಿ. ಕಾಯ್ದೆಗಳ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು.
3) ಪ್ರಾಧಿಕಾರದಲ್ಲಿ ನಕಲು ಕಡತ ತೆರೆಯುವ, ಅನುಮಾನಾಸ್ಪದ ನಿವೇಶನಗಳ ಹಂಚಿಕೆ ಪ್ರಕರಣಗಳಲ್ಲಿ ಹಾಗೂ ಪ್ರಾಧಿಕಾರದಿಂದ ಭೂಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಭೂಪರಿಹಾರ ನೀಡಲು ಹಂಚಿಕೆದಾರರ/ಭೂಮಾಲೀಕರ/ದಾಖಲೆಗಳ ನೈಜತೆ ಪರಿಶೀಲನೆ ಸಂಬಂಧಿಸಿದಂತೆ ವಿಚಾರಣೆ ವರದಿ ನೀಡುವುದು.
4) ಪ್ರಾಧಿಕಾರದ ಬಳಿ ನಡೆಯುವ ಪ್ರತಿಭಟನೆ/ಮುಷ್ಕರ/ಸಭೆ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಸೂಕ್ತ ಪೊಲೀಸ್ ರಕ್ಷಣೆ ನೀಡುವುದು.
5) ಮಾನ್ಯ ಆಯುಕ್ತರು/ಉಪ ಕಾರ್ಯದರ್ಶಿಗಳು, ಭೂಸ್ವಾಧೀನಾಧಿಕಾರಿಗಳು ಮತ್ತು ಉಪ ಆಯುಕ್ತರು (ಭೂಸ್ವಾಧೀನ) ರವರ ಕಛೇರಿಗಳಿಗೆ ಕಡತಗಳನ್ನು ಸ್ವೀಕರಿಸಿ ಮತ್ತು ಸಾರ್ವಜನಿಕರುಗಳಿಂದ ಸ್ವೀಕರಿಸಿದ ದೂರುಗಳನ್ನು ಆಧರಿಸಿ ವಿಚಾರಣೆ ನಡೆಸಿ ಸಮುಚಿತ ಮಾರ್ಗದಲ್ಲಿ ವರದಿಗಳನ್ನು ಸಲ್ಲಿಸಲಾಗುತ್ತದೆ.